ರಾಗ : ಷಣ್ಮುಖಪ್ರಿಯ 
ತಾಳ: ಏಕ

( ಅಳಿಸಂಕುಲವೆ ಮಾಮರನೆ ಬೆಳದಿಂಗಳೆ ಕೋಗಿಲೆಯೆ ) ೨ 
( ನಿಮ್ಮೆಲ್ಲರನು ಒಂದ ಬೇಡುವೆನು ) ೨
(ಎನ್ನೊಡೆಯ ಚನ್ನಮಲ್ಲಿಕಾರ್ಜುನದೇವರ ಕಂಡರೆ 
ಕರೆದು ತೋರಿರೆ ) ೨

( ಚಿಲಿಮಿಲಿ ಎಂದೋದುವ ಗಿಳಿಗಳಿರ
ನೀವು ಕಾಣಿರೆ , ನೀವು ಕಾಣಿರೆ 
ಸರವರದೊಳಗಾಡುವ ಹಂಸಗಳಿರ
ನೀವು ಕಾಣಿರೆ   ,  ಕಾಣಿರೆ ) ೨

( ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ , ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ , ಕಾಣಿರೆ ) ೨  || ಚಿಲಿಮಿಲಿ  ||

( ಗಿಡಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ
ಚನ್ನಮಲ್ಲಿಕಾರ್ಜುನದೇವನು ಎಲ್ಲಿದ್ದಾನೆಂಬುದು ಬಲ್ಲಡೆ
ನೀವು ಹೇಳಿರೆ , ಹೇಳಿರೆ ) ೨ || ಚಿಲಿಮಿಲಿ  ||

( ನೀವು ಕಾಣಿರೆ ಚನ್ನಮಲ್ಲಿಕಾರ್ಜುನನೆಲ್ಲಿ ಹೇಳಿರೆ ) ೨

Category:ವಚನ ಸಾಹಿತ್ಯ
ವರ್ಗ:ಅಕ್ಕಮಹಾದೇವಿಯವರ_ವಚನಗಳು